User:Maheshmmhshm

From Wikidata
Jump to navigation Jump to search

ಆಲಿಭಾಗ್ ಕೋಟೆ

[edit]

ಮರಾಠರ ಪ್ರಸಿದ್ಧ ದೊರೆ ಶಿವಾಜಿ ಅಧಿಪತ್ಯದಲ್ಲಿ ಸೇನಾ ದಳಪತಿಯಾಗಿದ್ದ ‘ಸರ್ಖೆಲ್ ಕನ್ಹೊಜಿ ಆಂಗ್ರೆ’ 17ನೆ ಶತಮಾನದಲ್ಲಿ ಕಟ್ಟಿಸಿದ ಸ್ಥಳ. ರಾಯಗಡದ ಮೊದಲ ಹೆಸರು ಕುಲಬ, ಆದರಿಂದ ಈ ಕೋಟೆಯನ್ನು ‘ಕೊಲಾಬ ಕೋಟೆ’ ಅಥವಾ ‘ಕುಲಬ ಕೋಟೆ’ ಎಂದೂ ಕರೆಯಲಾಗಿದೆ. ಈ ಸ್ಥಳದಲ್ಲಿ ಹಿಂದೆ ಇಸ್ರೇಲ್ ದೇಶದಿಂದ ವಲಸೆ ಬಂದ( ಆಗಿನ್ನೂ ವೀಸಾ ಪಾಸ್ ಪೋರ್ಟು ಗಳು ಬಳಕೆಯಲ್ಲಿರಲಿಲ್ಲ!!! ) ಜನಾಂಗಕ್ಕೆ ಸೇರಿದ್ದ ‘ಆಲಿ’ ಎನ್ನುವ ವ್ಯಕ್ತಿಯೊಬ್ಬನಿರಲು ಅವನು ಬಹಳ ಶ್ರೀಮಂತನು ಮತ್ತು ಆಸ್ತಿವಂತನಾಗಿದ್ದನು. ಅವನ ಮಾವು ಮತ್ತು ತೆಂಗಿನ ತೋಟಗಳು ಇಲ್ಲಿದ್ದವು. ಮರಾಠಿ ಭಾಷೆಯಲ್ಲಿ ಭಾಗ್ ಎಂದರೆ ತೋಟ . ಹಾಗಾಗಿ "ಆಲಿಚಿ ಭಾಗ್"(ಆಲಿಯ ತೋಟ) ಕಾಲ ಕ್ರಮೇಣ ಉಚ್ಚಾರದಲ್ಲಿ ಆಲಿಭಾಗ್ ಆಗಿದೆ.

ರಾಜಕೀಯ/ಇತಿಹಾಸ

[edit]

ಮರಾಠರ ರಾಜ್ಯ ವಿಸ್ತರಣೆಯಾಗುತ್ತಿದ್ದಾಗ ಸಂಪೂರ್ಣ ದಕ್ಷಿಣ ಕೊಂಕಣ ಪ್ರದೇಶ ಮರಾಠರ ಹಿಡಿತಕ್ಕೆ ಬಂದಾಗ ಆಗಿನ ದೊರೆ ಶಿವಾಜಿ ಮಹಾರಾಜರು ಈ ಪ್ರದೇಶದ ನಿಯಂತ್ರಣದ ಹಿಡಿತ ಸಾಧಿಸಲು 1662 ರಲ್ಲಿ ಕಟ್ಟಿಸಿಕೊಂಡ ಕೋಟೆಯೇ ಈ ಆಲಿಭಾಗ್ ಕೋಟೆ. ಅಷ್ಟೇ ಅಲ್ಲದೆ ಇದೇ ಕೋಟೆಯನ್ನು ಮರಾಠ ಸಾಮ್ರಾಜ್ಯದ ಜಲ ಸೇನೆಯ ಮುಖ್ಯ ಕಛೇರಿಯನ್ನಾಗಿ ಮಾಡಿಕೊಂಡರು. ಈ ಕೋಟೆಯ ನಿಯಂತ್ರಣ ಜವಾಬ್ದಾರಿಯನ್ನು ಶಿವಾಜಿ ಮಹಾರಾಜರು ದರ್ಯ ಸಾಗರ ಮತ್ತು ಮಾಣಿಕ್ ಭಂಡಾರಿ ಎನ್ನುವರಿಗೆ ವಹಿಸಿದ್ದರು. ಆ ಸಮಯದಲ್ಲಿ ಈ ಕೋಟೆ ಬ್ರಿಟೀಷರ ಹಡಗುಗಳ ಮೇಲೆ ದಾಳಿ ಮಾಡುವ ಕೇಂದ್ರವಾಗಿತ್ತು. 1713 ರಲ್ಲಿ ಪೆಶ್ವೇಯಾಗಿದ್ದ ಬಾಲಾಜಿ ವಿಶ್ವನಾಥನು ಒಪ್ಪಂದವೊಂದರ ಪ್ರಕಾರ ಆಲಿಭಾಗ್ ಕೋಟೆಯೂ ಸೇರಿದಂತೆ ಇನ್ನು ಕೆಲವು ಸಮುದ್ರ ತೀರ ಪ್ರದೇಶಗಳನ್ನು ಕನ್ಹೊಜಿ ಆಂಗ್ರೆಯ ನಿಯಂತ್ರಣಕ್ಕೆ ಕೊಡಲು, ಆತನು ಬ್ರಿಟೀಷರ ಮೇಲೆ ಸಮರೋಪಾದಿಯಲ್ಲಿ ಜಲಮಾರ್ಗವಾಗಿ ದಾಳಿ ಮಾಡಲು ಈ ಪ್ರದೇಶಗಳನ್ನು ಬಳಸಿಕೊಂಡನು. 1722 ರಲ್ಲಿ ಬಾಂಬೆ ಸರ್ಕಾರ ಆಲಿಭಾಗ್ ನಿಂದ ತಮಗಾಗುತ್ತಿರುವ ಆಪತ್ತುಗಳಿಗೆ ತಕ್ಕ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿತು. ಅದರಲ್ಲೂ ಕನ್ಹೊಜಿ ಆಂಗ್ರೆಯ ಚಟುವಟಿಕೆಗಳಿಂದ ಬ್ರಿಟೀಷ್ ಆಡಳಿತ ರೋಸಿಹೋಗಿತ್ತು. ಆದ ಕಾರಣ ಪೋರ್ಚುಗೀಸರ ಒಡಗೂಡಿ ಆಲಿಭಾಗ್ ಮೇಲೆ ದಾಳಿ ಮಾಡಿತ್ತು. ಆ ದಾಳಿಯಲ್ಲಿ ಪರದೇಶಿಗಳು ಸಫಲರಾಗಲು ಅಸಾಧ್ಯವಾಗಿತ್ತು ಎನ್ನುತ್ತದೆ ಇತಿಹಾಸ.